ನಿರ್ವಾಣ ಮಂತ್ರಿ -
	18ನೆಯ ಶತಮಾನದ ವೀರಶೈವ ಕವಿ. ಶಿವಪೂಜಾ ವಿಧಾನವೆಂಬ ಗ್ರಂಥವನ್ನು ಬರೆದಿರುವುದಲ್ಲದೆ ಕ್ರಿಯಾಸಾರದ ಕೆಲವು ಭಾಗಗಳಿಗೆ ಸಂಸ್ಕøತದಲ್ಲಿ ವ್ಯಾಖ್ಯಾನ ರಚಿಸಿ, ವಿವೇಕಚಿಂತಾಮಣಿಯ ಸ್ವಲ್ಪ ಭಾಗವನ್ನು ಸಂಸ್ಕøತಕ್ಕೆ ಅನುವಾದ ಮಾಡಿದ್ದಾನೆ. ಈತ ಕೆಳದಿಯ ರಾಜ ಸೋಮಶೇಖರನಾಯಕನಲ್ಲಿ (1714-1780) ಪ್ರಧಾನಿಯಾಗಿದ್ದ. ಗದ್ಯ ರೂಪವಾಗಿದ್ದು ಅಲ್ಲಲ್ಲಿ ಸಂಸ್ಕøತ ಶ್ಲೋಕಗಳನ್ನು ಒಳಗೊಂಡ ಶಿವಪೂಜಾವಿಧಾನ ಗ್ರಂಥ ವೇದಶಾಸ್ತ್ರಕ್ಕೆ ಅನುಸಾರವಾದ ಶಿವ ಪೂಜಾಕ್ರಮವನ್ನು ಹೇಳುತ್ತದೆ.
(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ